ಸೋಲಿಗ ಸಮುದಾಯದ ಪಾರಂಪರಿಕ ಮತ್ತು ಆಧುನಿಕ ಪ್ರವೃತ್ತಿಗಳು
ಸೋಲಿಗ ಸಮುದಾಯದ ಪಾರಂಪರಿಕ ಮತ್ತು ಆಧುನಿಕ ಪ್ರವೃತ್ತಿಗಳು - ಡಾ. ಹೆಚ್ ಎಸ್ ಆನಂದಕುಮಾರ ಚಾಮರಾಜನಗರ ಯಾವುದೇ ಒಂದು ಸಮುದಾಯ ತನ್ನದೇ ಆದ ಒಂದು ಅಸ್ತಿತ್ವವನ್ನು ಪಡೆದುಕೊಂಡು ಇತರೆ ಸಮುದಾಯಗಳಿಗಿಂತ ಭಿನ್ನವಾದ ವಿಶಿಷ್ಟಾಂಶಗಳನ್ನು ಹೊಂದಿರುತ್ತದೆ . ಇದನ್ನೆ ಆಯಾ ಸಮುದಾಯ ಅಥವಾ ಜನಾಂಗದ ‘ ಅನನ್ಯತೆ ’ ಎಂದು ಹೇಳಬಹುದು . ಹೀಗೆ ತಮ್ಮನ್ನು ತಾವು ಗುರುತಿಸಿಕೊಳ್ಳುವ , ಸ್ವಂತಿಕೆಯನ್ನು ಪ್ರದರ್ಶಿಸುವ , ಆ ಮೂಲಕ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವ ಒಂದು ಪ್ರಕ್ರಿಯೆಯೇ ‘ ಸಾಂಸ್ಕ ø ತಿಕ ಅನನ್ಯತೆ ’. ಹೀಗೇ ನಮ್ಮನ್ನು ನಾವು ಅರಿತುಕೊಳ್ಳಲು , ನಮ್ಮ ಸ್ವಂತಿಕೆಯನ್ನು ಗುರುತಿಸಿಕೊಳ್ಳಲು ಜನಸಾಮಾನ್ಯರ ಜೀವನ ನಿರ್ವಹಣೆಯ ಕ್ರಮವನ್ನು ನಿಕಟವಾಗಿ ನೋಡುವ ಪ್ರಯತ್ನ ಜಾನಪದದ್ದಾಗಿದೆ . ಬುಡಕಟ್ಟು ಅರ್ಥ - ವ್ಯಾಖ್ಯಾನ ಆಧುನಿಕ ಮಾನವನ ಜೀವನಕ್ರಿಯೆ ಜಾನಪದದ ಅಸ್ತಿತ್ವವನ್ನು ಬದಲಾಯಿಸಿದೆ . ಜಗತ್ತಿನಲ್ಲಿ ಜಾಗತೀಕರಣದ ಪರಿಣಾಮವಾಗಿ ಹಲವಾರು ಬದಲಾವಣೆಗಳಾಗಿವೆ . ಕೈಗಾರೀಕರಣದಿಂದಾಗಿ ಇಂದು ಆಧುನಿಕ ತಂತ್ರಜ್ಞಾನಗಳು ಬಹಳಷ್ಟು ಬೆಳೆಯುತ್ತಿದೆ . ಆದರೂ ಸಹ ಭೂಮಿಯ ಮೇಲಿನ ಯಾವ ವಸ್ತುಗಳ ಮೇಲೆಯೂ ಮಾಲೀಕತ್ವವನ್ನು ಹೊಂದದೇ ಇರುವುದು , ಸಮುದಾಯದವರೆಲ್ಲರೂ ತಮ್ಮ ಪುರಾತನರನ್ನು ಪೂಜಿಸುವುದು , ಸಾ...