ಏಕೀಕರಣ ಚಳವಳಿ ಮತ್ತು ಸಾಹಿತ್ಯ
ಏಕೀಕರಣ ಚಳವಳಿ ಮತ್ತು ಸಾಹಿತ್ಯ ಅನೇಕತೆಯಲ್ಲಿ ಏಕತೆ ಎಂಬ ವೈಶಿಷ್ಟ್ಯತೆಯ ಪರಂಪರೆಯನ್ನುಳ್ಳ ಭಾರತವು 29 ರಾಜ್ಯಗಳು , 07 ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡ ಗಣರಾಜ್ಯವಾಗಿದ್ದು , ಕರ್ನಾಟಕವು ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾಗಿದೆ . ಅನೇಕ ಮಹನೀಯರು ತಮ್ಮ ಶ್ರಮ , ತ್ಯಾಗ , ಹೋರಾಟಗಳ ಮೂಲಕ ಹಲವಾರು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕದ ಪ್ರದೇಶಗಳನ್ನು ಏಕೀಕರಣಗೊಳಿಸಿ ಇಲ್ಲಿಯ ನಾಡು , ನುಡಿ , ನೆಲ , ಜಲ ಹಾಗೂ ಸಂಸ್ಕ ø ತಿಗಳಿಗೆ ಅನನ್ಯತೆಯನ್ನು ತಂದುಕೊಟ್ಟರು . ಆದರೆ ಇಂದು ಕೆಲವರ ಸ್ವಾರ್ಥಸಾಧನೆಯ ರಾಜಕೀಯ ಲಾಭ ಹಾಗೂ ದುಷ್ಕ ø ತ್ಯಗಳಿಂದಾಗಿ ಏಕೀಕರಣ ಚಳವಳಿಯ ಮೂಲಕ ಕಟ್ಟಿದ ಅಖಂಡ ಕರ್ನಾಟಕದ ಏಕತೆಗೆ ಆತಂಕದ ಸ್ಥಿತಿ ನಿರ್ಮಾಣವಾಗಿದೆ . ಆದುದ್ದರಿಂದ ‘ ಏಕೀಕರಣ ಚಳವಳಿ ಮತ್ತು ಸಾಹಿತ್ಯ ’ ಎಂಬ ವಿಷಯದ ಕುರಿತ ಅನೇಕ ಚರ್ಚೆಗಳು ಪ್ರಸ್ತುತದಲ್ಲಿ ನಡೆಯಬೇಕಾದುದು ಜರೂರಿನ ಕಾರ್ಯವೆನಿಸುತ್ತಿದೆ . ಒಂದು ನಿಗದಿತ ಭೌಗೋಳಿಕ ಪರಿಸರದ ಜನರಿಗೆ ತಮ್ಮನ್ನು ತಾವು ಸಂವಹನಿಸಿಕೊಳ್ಳಲು ಒಂದು ಭಾಷೆ ಅವಶ್ಯಕ . ಏಕೆಂದರೆ ಭಾಷೆಯು ಜನರ ಚೈತನ್ಯವೂ ಹೌದು . ಭಾಷೆಯಿದ್ದಲ್ಲಿ ಸಾಹಿತ್ಯದ ಸೃಷ್ಟಿಯಾಗುತ್ತದೆ . ಚಳವಳಿ ನಿರಂತರವಾಗಿ ನಡೆಯುವ ಒಂದು ಕ್ರಿಯಾತ್ಮಕ ಪ್ರಕ್ರಿಯೆ . ಚಳವಳಿಯೊಂದು ಜೀವಂತಿಕೆ ಪಡೆದುಕೊಳ್ಳಬೇಕ...